ಪರೀಕ್ಷಾ ಸಿದ್ಧತೆ ಹೇಗೆ ?



        ಪರೀಕ್ಷಾ ಸಿದ್ದತೆ ಹೇಗೆ ?
ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಶುಭಾಶೀರ್ವಾದಗಳು
            ಭಾರತದ ಭವಿಷ್ಯ ಇಂದಿನ ವಿದ್ಯಾರ್ಥಿಗಳಲ್ಲಿ ಅಡಗಿದೆ. ಏಕೆಂದರೆ ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು, ಪ್ರಭುಗಳು ಮತ್ತು ಆಢಳಿತಗಾರರು ಆದ್ದರಿಂದ ನಿಮ್ಮ ಮುಂದಿನ ಶೈಕ್ಷಣಿಕ ಪ್ರಗತಿಗೆ ಆಧಾರ 10 ಮತ್ತು 12 ನೇ ತರಗತಿ ಪರೀಕ್ಷೆಗೆ ಪರೀಕ್ಷೆಗೆ ಸಿದ್ಧರಾಗುವ ಕುರಿತು ಮಾರ್ಗದರ್ಶನವು ಇಲ್ಲಿದೆ,
      * ಪರೀಕ್ಷೆಗೆ ನೀವು ಹೇಗೆ ಸಿದ್ದರಾಗಬೇಕು?
      * ಅಭ್ಯಾಸ ಕ್ರಮ ಹೇಗಿರಬೇಕು?
      * ಏಕಾಗ್ರತೆ ಎಂದರೇನು ?
      * ಅತ್ಮ ವಿಶ್ವಾಸ ಮೂಡುವುದು ಹೇಗೆ?
      * ಪರೀಕ್ಷಾ ಜ್ವರ ಎಂದರೇನು ? ಅದರ ನಿವಾರಣೆ ಹೇಗೆ ?
      * ಪರೀಕ್ಷಾ ಸಮಯದಲ್ಲಿ ಆರೋಗ್ಯ ಪಾಲನೆ ಮತ್ತು ಆಹಾರ ಕ್ರಮ  ಹೇಗಿರಬೇಕು?
      * ಓದಲು ಒಳ್ಳೆಯ ಸಮಯ ಯಾವುದು ?
      * ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿ ಹೇಗೆ ತನ್ನ ಆತಂಕ, ದುಗುಡವನ್ನು ನಿವಾರಿಸಿಕೊಳ್ಳುವುದು?
      * ಪರೀಕ್ಷೆ ಮುಗಿದ ನಂತರ ಮುಂದಿನ ವಿಷಯದ ತಯಾರಿ ಹೇಗಿರಬೇಕು?
      * ಸ್ಮರಣ ಶಕ್ತಿ ವೃದ್ಧಿಸಿಕೊಳ್ಳುವ ಬಗೆ ಹೇಗೆ ?
      * ಪೋಷಕರ ಪಾತ್ರವೇನು ?
          ಎಂಬುದನ್ನು  ಪೋಷಕರು ಮತ್ತು ವಿದ್ಯಾರ್ಥಿಗಳು ಅರಿಯ ಬೇಕಾಗಿದೆ.
ಪರೀಕ್ಷಾ ಸಿದ್ದತೆ ಹೇಗೆ ?
1)         ಪರೀಕ್ಷೆಗೆ ವಿದ್ಯಾರ್ಥಿಗಳು ಹೇಗೆ ಸಿದ್ಧರಾಗಬೇಕು ?
       10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳು ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿವೆ. ವಿದ್ಯಾರ್ಥಿ ಸುಮಾರು 10 ತಿಂಗಳಿಂದ ಅಭ್ಯಾಸ ಮಾಡಿರುವ ಅಂಶಗಳನ್ನು ವ್ಯಕ್ತಪಡಿಸುವ ಮುಖ್ಯ ಹಂತ ವಾರ್ಷಿಕ ಪರೀಕ್ಷೆ.      ವಿದ್ಯಾರ್ಥಿ ಪ್ರತಿ ದಿನದ ಪಾಠಗಳನ್ನು ಕ್ರಮವಾಗಿ ಅಧ್ಯಯನ ಮಾಡಿದ್ದರೆ ಪರೀಕ್ಷೆ ಎದುರಿಸುವುದು ಸುಲಭ  ‘ಅನಭ್ಯಾಸೇ ವಿಷಂ ವಿದ್ಯಎನ್ನುತ್ತಾರೆ. ಅಭ್ಯಾಸವಿಲ್ಲದಿದ್ದರೆ ವಿದ್ಯೆ ಎಂಬುದು ವಿಷವಾಗಿ ಪರಿಣಮಿಸುತ್ತದೆಪ್ರಾರಂಭದಿಂದಲೂ ಪಠ್ಯ ಪುಸ್ತಕಗಳನನ್ನು ಅಭ್ಯಾಸಮಾಡಿ ಶಾಲೆಯಲ್ಲಿನ  ಬೋಧನಾ  ತರಗತಿಗಳಲ್ಲಿ  ಏಕಾಗ್ರತೆಯಿಂದ  ಭಾಗವಹಿಸಿದ್ದರೆ  ವಿಷಯ  ಜ್ಞಾನ  ಇರುತ್ತದೆ.   ಈಗಲೂ  ಕಾಲ  ಮಿಂಚಿಲ್ಲ ಇಂದಿನಿಂದಲೇ ಶ್ರಮವಹಿಸಿ ಅಭ್ಯಾಸಮಾಡಿದರೆ ಉತ್ತೀರ್ಣರಾಗುವಲ್ಲಿ ತೊಂದರೆ ಇಲ್ಲ .
2)        ಏಕಾಗ್ರತೆ ಎಂದರೇನು ?
          ಏಕ +ಅಗ್ರತೆ = ಏಕಾಗ್ರತೆಏಕ ಎಂದರೆ ಒಂದು, ಅಗ್ರತೆ ಎಂದರೆ ಪ್ರಾಧಾನ್ಯತೆ. ನಾವು ಒಂದು ವಿಷಯದ ಬಗ್ಗೆ  ನಮ್ಮ ಮನಸ್ಸುನ್ನು ಕೇಂದ್ರೀಕರಿಸುವುದು, ಕೆಲವು ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಠ, ಪ್ರವಚನ ನಡೆಯುವ ಸಮಯದಲ್ಲಿ ಕತ್ತಿನ ಸರವನ್ನು ಬೆರಳಿನಲ್ಲಿ ತಿರುಗಿಸುವುದು, ಕಾಲಿನ ಚಪ್ಪಲಿ ತೆಗೆದು ಅದರ ಜೊತೆ ಆಟವಾಡುವುದು, ಮುಂದಿನ ಬೆಂa£À ತನ್ನ ಸಹಪಾಠಿಗಳಿಗೆ ಚುಚ್ಚುವುದು, ಇತ್ಯಾದಿ ಕೀಟಲೆ ಮಾಡುವುದುಂಟು ಇದರಿಂದ ವಿದ್ಯಾರ್ಥಿ ದೈಹಿಕವಾಗಿ ತರಗತಿ ಕೋಣೆಯಲ್ಲಿರಬಹುದು ಆದರೆ ಮಾನಸಿಕವಾಗಿ ಇರಲಾರರು. ನೀರು ಬರುತ್ತಿರುವ ಕಾಲುವೆ ಕವಲು ಹೊಡೆದು ಒಂದು ಕಾಲುವೆ ಎರಡಾದರೆ ಮೊದಲು ಕಾಲುವೆಯಲ್ಲಿ ಹಿಂದೆ ಬಂದಷ್ಟು ನೀರು ಕವಲು ಹೊಡೆದ ಒಂದೊಂದು ಕಾಲುವೆಯಲ್ಲಿ ಬರಲು ಸಾಧ್ಯವಿಲ್ಲ. ವ್ಯಕ್ತಿ ತರಗತಿಯಲ್ಲಿ ಪಾಠ ಕೇಳುತ್ತಿದ್ದು ಶಿಕ್ಷಕರನ್ನೇ ನೋಡುತ್ತಿರಬೇಕು. ಕೈ, ಕಾಲುಗಳನ್ನು ಅಲುಗಾಡಿಸುವುದನ್ನು ಮಾಡಬಾರದು.
                                                ವಿದ್ಯಾರ್ಥಿಗಳೇ ನೀವು
                                                                ಕಷ್ಟಪಟ್ಟು ಓದಬೇಡಿ      
                                                                ಇಷ್ಟಪಟ್ಟು ಓದಿ
                                                                ಕಷ್ಟಪಟ್ಟು ಓದುವುದು ನಿಮಗೆ ಶ್ರಮದಾಯಕ
                                                                ಇಷ್ಟಪಟ್ಟು ಓದುವುದು ನಿಮಗೆ ಲಾಭದಾಯಕ
3)         ಆತ್ಮ ವಿಶ್ವಾಸ ಹೇಗೆ ಮೂಡುವುದು ?
         ಮಾನವನ ಪ್ರತಿಯೊಂದು ಚಟುವಟಿಕೆಗೂ ಕಾರಣ ಮನಸ್ಸು, ಆಸಕ್ತಿ ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ಪರೀಕ್ಷೆಯಲ್ಲಿ ನಾನು ಚೆನ್ನಾಗಿ ಬರೆಯಬಲ್ಲೆ ಎನ್ನುವ ಧೈರ್ಯವಿದ್ದರೆ ಸಾಕು ಅದೇ ಆತ್ಮವಿಶ್ವಾಸ.   ನಾವೆಲ್ಲರೂ ಧನಾತ್ಮಕವಾಗಿ ಯೋಚಿಸುವ ಮನೋಭಾವ ಬೆಳಸಿಕೊಳ್ಳಬೇಕು. ನಾನೂ ಚೆನ್ನಾಗಿ ಬರೆಯಬಲ್ಲೆ, ನನ್ನಲ್ಲಿ ಸಾಮxÀåð ಇದೆ ಎನ್ನುವ ನಂಬಿಕೆ ಇರಬೇಕು. ನಿನ್ನ ಮೇಲೆ ನಿನಗೇ ನಂಬಿಕೆ ಇಲ್ಲದಿದ್ದರೆ  ಬೇರೆಯವರು  ಹೇಗೆ ನಿನ್ನ ಮೇಲೆ ನಂಬಿಕೆ ಇಟ್ಟಾರು ? ಎಂಬ ಅಂಶವನ್ನು ನಾವು ಗಮನಿಸಬೇಕು.
                ಎಲ್ಲಾ ವಿದ್ಯಾರ್ಥಿಗಳು ಒಂದು ಅಂಶವನ್ನು ಗಮನಿಸಬೇಕು. ನಾನು ಒಳ್ಳೆ ಟೂಷನ್ಗೆ ಹೋಗಿಲ್ಲ, ದುಬಾರಿ ಬೆಲೆಯ ಡೈಜೆಸ್ಟ್ಗಳನ್ನು ಓದಿಲ್ಲ ಎಂಬ ಕೀಳರಿಮೆಯನ್ನು ನಿಮ್ಮ ಮನದಾಳದಿಂದ ಕಿತ್ತೆಸೆಯಬೇಕು. ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು.     ಪಠ್ಯ ಪುಸ್ತಕಗಳನ್ನು ಏಕಾಗ್ರತೆಯಿಂದ ಓದಿದರೆ ಸಾಕು.   ವಿಷಯವನ್ನು ಮರೆಯಲೇಬಾರದು.



4)         ಪರೀಕ್ಷಾ ಜ್ವರ ಎಂದರೇನು ? ನಿವಾರಣೆ ಹೇಗೆ
          ಯಾವ ವಿದ್ಯಾರ್ಥಿ ಮೊದಲಿನಿಂದಲೂ ನಿಯಮಿತವಾಗಿ ಅಭ್ಯಾಸ ಮಾಡಿರುವುದಿಲ್ಲವೋ ವಿದ್ಯಾರ್ಥಿಯಲ್ಲಿ ಆತ್ಮ ವಿಶ್ವಾಸ ಕಡಿಮೆ ಇರುತ್ತದೆ. ಎಲ್ಲಿ ನಾನು ಅನುತ್ತೀರ್ಣನಾಗುತ್ತೇನೆಯೋ ಅಥವಾ ಕನಿಷ್ಠ ಅಂಕ ಗಳಿಸುತ್ತೇನೆಯೋ ಎಂಬ ಭಯ, ದುಗುಡ, ಸಂಶಯ ಇರುತ್ತದೆ. ಇವುಗಳಿಂದಾಗಿ ಮಾನಸಿಕವಾಗಿ ಹೆಚ್ಚು ಬಳಲುತ್ತಾನೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಹೆಚ್ಚು ಸಮಯ ಓದಲು ಪ್ರಯತ್ನಿಸುವಾಗ ದೈಹಿಕವಾಗಿಯೂ ಬಳಲಿಕೆ ಆಗಿ ಆಹಾರದ ಕಡೆಗೂ ಕೂಡ ತಿರಸ್ಕಾರ ಉಂಟಾಗಿ ನಿಶ್ಯಕ್ತಿಗೆ ತುತ್ತಾಗಿ ರೋಗಪೀಡಿತರಾಗಿ ಹಾಸಿಗೆ ಹಿಡಿಯುತ್ತಾರೆ. ಇದರಿಂದ  ¥Áರಾಗಲು ಸತತ ಪರಿಶ್ರಮ, ಕ್ರಮಬದ್ದ ನಿಯಮ ಪಾಲಿಸುತ್ತಾ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು.
5)         ಅನುತ್ತೀರ್ಣತೆ ಅವಮಾನವೇ ?
         ಅನುತ್ತೀರ್ಣತೆ ಖಂಡಿತ ಅವಮಾನವಲ್ಲ ಹಾಗೆಂದ ಮಾತ್ರಕ್ಕೆ ಅನುತ್ತೀರ್ಣತೆಯೇ ಅಭ್ಯಾಸವಾಗಬಾರದು, ಎಷ್ಟೋ ಮಹಾನ್ ವ್ಯಕ್ತಿಗಳು 10ನೇ ತರಗತಿ, 12ನೇ ತರಗತಿಗಳಲ್ಲಿ ಅನುತ್ತೀರ್ಣರಾಗಿ, ಮಹಾನ್ ಸಾಧನೆ ಮಾಡಿ ವಿಶ್ವಮಾನ್ಯರಾಗಿರುವರು ಇದ್ದಾರೆ. ಪ್ರಪಂಚದ ಸಿನಿಮಾ ರಂಗದಲ್ಲಿ ದೃವತಾರೆಯಾದ ಜಾಕಿಚಾನ್ 1ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರಂತೆ !
                ಕಳೆದ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿನಿಗೆ ಅಪಘಾತವಾಗಿ ಮಲಗಿಕೊಂಡೆ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಉದಾಹರಣೆಯು ಇದೆ. ದೃಢ ಸಂಕಲ್ಪಮಾಡಬೇಕು ಅಷ್ಟೆ. ನಾನು ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು.
6)         ಪರೀಕ್ಷಾ ಸಮಯದಲ್ಲಿ ಆರೋಗ್ಯ ಪಾಲನೆ ಹೇಗೆ ?
           ಇಂದಿನ ಕಾಲದಲ್ಲಿ ಆರೋಗ್ಯವೇ ಮಹಾಭಾಗ್ಯ ವಿದ್ಯಾರ್ಥಿ ತಾನು ಓದಿಕೊಳ್ಳುವ ಸ್ಥಳವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಸರಿಯಾದ ಸಮಯದಲ್ಲಿ ಆಹಾರ ಸ್ವೀಕರಿಸಬೇಕು. ಪದೇಪದೇ ಬಾಯಾಡಿಸುತ್ತಾ ಸಿಕ್ಕಿದ್ದೆಲ್ಲಾ ತಿಂದು ಅಜೀರ್ಣಉಂಟಾಗಿ ಅದರಿಂದ ತೊಂದರೆಗೆ ಸಿಲುಕಬಾರದು. ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದ ಹಾಗೆ ಅತಿಯಾಗಿ ಮಸಾಲೆ ಪದಾರ್ಥಗಳನ್ನು ಬಳಸುವ ತಿಂಡಿಗಳನ್ನು ತಿನ್ನದೆ ಸುಲಭವಾಗಿ ಜೀರ್ಣವಾಗುವ ಸಸ್ಯಾಹಾರವನ್ನು ತಿನ್ನುವುದು ಒಳಿತು. ತರಕಾರಿ, ಹಣ್ಣುಗಳ ಬಳಕೆ ಮಾಡಿ. ಪರೀಕ್ಷೆ ದಿನಗಳಂದು ಪರೀಕ್ಷೆ ಪ್ರಾರಂಭವಾಗುವುದಕ್ಕೆ ಎರಡು ಗಂಟೆಗಳ ಮೊದಲು ತಿಂಡಿ ತಿಂದಿರಬೇಕು, ಆಗತಾನೆ ಬಿಸಿ ಬಿಸಿ ತಿಂಡಿ ಹೊಟ್ಟೆ ತುಂಬ ತಿಂದು ಪರೀಕ್ಷೆಗೆ ಹಾಜರಾದರೆ ಒಳ್ಳೆಯ ನಿದ್ದೆ ಮಾಡುವ ಸಂದರ್ಭ ಒದಗಿಬಿಡುತ್ತದೆ. ಸಾಧ್ಯವಾದಷ್ಟು  ಪರೀಕ್ಷೆ ಬರೆಯುವವರು ಪರೀಕ್ಷೆಗೆ ಮುಂಚೆ ಲಘು ಉಪಹಾರ ತಿನ್ನಬೇಕು ಅನ್ನ ತಿಳಿಸಾರು, ಇಡ್ಲಿ, ಪೊಂಗಲ್ ಇತ್ಯಾದಿಗಳಾದರೆ ಒಳಿತು. ಬ್ರೆಡ್, ಬನ್, ಕೇಕ್, ಜಾಮ್, ಐಸ್ ಕ್ರೀಮ್ ತಿನ್ನುವುದರಿಂದ ಕೆಲವರಿಗೆ ನೆಗಡಿ, ಅಲರ್ಜಿ ಅಸಿಡಿಟಿ ಆಗುವ ಸಂಭವ ಇರುತ್ತೆ. ಪರೀಕ್ಷೆಯಲ್ಲಿ ನೀವು ಚೆನ್ನಾಗಿ ಬರೆಯಬೇಕಾದರೆ ನಿಮ್ಮ ಆರೋಗ್ಯ ಚೆನ್ನಾಗಿರಬೇಕಲ್ಲವೆ ?
7)         ಓದಲು ಓಳ್ಳೆಯ ಸಮಯ ಯಾವುದು ?
           ಮೊದಲು ಮನಸ್ಸನ್ನು ನಿರಾಳಮಾಡಿಕೊಳ್ಳಬೇಕು ಬೆಳಗ್ಗೆ ಕನಿಷ್ಠ 5.00ಗಂಟೆಗೆ ಎದ್ದು ಮುಖ ತೊಳೆದು ಒಂದು ಅಥವಾ JgÀqÀÄ ಲೋಟ Gಗುರು ಬೆಚ್ಚನೆಯ ಶುದ್ಧ ಕುಡಿಯುವ ನೀರನ್ನು ಕುಡಿದು ಓದಲು ಪ್ರಾರಂಭಿಸಿ 7 ಗಂಟೆಗೆ 20 ಅಥವಾ 30 ನಿಮಿಷಗಳ ಇದ್ದಾಗ ಸರಳ ವ್ಯಾಯಾಮ ಮಾಡಿ, ಹಾಲು ಅಥವಾ ತರಕಾರಿ ಜ್ಯೂಸ್ ಕುಡಿದು ಸ್ನಾನಮಾಡಿ ಮತ್ತೆ ಓದಲು ಪ್ರಾರಂಭಿಸಿ 8 ಅಥವಾ 8.30ಕ್ಕೆ ತಿಂಡಿ ತಿಂದರೆ ಒಳ್ಳೆಯದು. ಪರೀಕ್ಷೆ ಮುಗಿದ ಮೇಲೆ ದಿನ, ಬರೆದ ಪ್ರಶ್ನೆಪತ್ರಿಕೆಯ ಬಗ್ಗೆ ಚಿಂತಿಸದೆ ನಾಳೆ ನಡೆಯುವ ಪರೀಕ್ಷಾ ವಿಷಯದ ಬಗ್ಗೆ ಗಮನಹರಿಸಬೇಕು.
                ಪರೀಕ್ಷೆ ಮುಗಿದ ನಂತರ ಶುಚಿ, ರುಚಿಯಾದ, ಪೌಷ್ಠಕಾಂಶುಳ್ಳ ಆಹಾರ ತಿಂದು 10,15 ನಿಮಿಷ ವಿಶ್ರಾಂತಿ ಪಡೆದು ಮತ್ತೆ ಓದಲು ಪ್ರಾರಂಭಿಸಬೇಕು. ಸಂಜೆ 5 ರಿಂದ 6 ಮಧ್ಯೆ ನಿಮಗಿಷ್ಟವಾದ ಆಟ, ವ್ಯಾಯಾಮ 10-15 ನಿಮಿಷ ಮಾಡಬಹುದು. ಅನಂತರ ಯಾವುದಾದರೂ ಹಣ್ಣಿನ ಜ್ಯೂಸ್ ಕುಡಿದು ಮತ್ತೆ ಓದಲು ಪ್ರಾರಂಭಿಸಿ ರಾತ್ರಿ 7 ಗಂಟೆಗೆ ಊಟಮಾಡಿ 10 ಗಂಟೆಗೆ ಮಲಗಲು ಮರೆಯಬಾರದು. ವಿದ್ಯಾರ್ಥಿಗಳು ತಮಗೆ ತಕ್ಕಂತೆ ಸ್ವಲ್ಪ ಬದಲಾವಣೆ  ಮಾಡಿಕೊಳ್ಳಬಹುದು.
8)         ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿ ಹೇಗೆ ತನ್ನ ಆತಂಕ, ದುಗುಡವನ್ನು ನಿವಾರಿಸಿಕೊಳ್ಳುವುದು.
            ಈಗಾಗಲೇ ತಿಳಿಸಿದಂತೆ ವಿದ್ಯಾರ್ಥಿಗಳು ಧನಾತ್ಮಕ ಯೋಚನೆ ಮಾಡಬೇಕು. ಹೇಗೆಂದರೆ ನಾನು ಚೆನ್ನಾಗಿ ಅಧ್ಯಯನ ಮಾಡಿದ್ದೇನೆ. ಪರೀಕ್ಷೆ ಸುಲಭವಾಗಿರುತ್ತೆ ನಾನು ಯಶಸ್ವಿಯಾಗಿ ಬರೆಯಬಲ್ಲೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳಬೇಕು. ವಿದ್ಯಾರ್ಥಿಗಳು ಬೆಲ್ ಹೊಡೆದ ಮೇಲೂ ಆತುರಾತುರವಾಗಿ ಯಾವುದೋ ಪುಸ್ತಕವನ್ನು  ತಿರುವುದರಿಂದ ಭಯ, ಆತಂಕ ದುಗುಡ ಹೃದಯದ ಬಡಿತ ಜಾಸ್ತಿ ಆಗುತ್ತದೆ. ಕೆಲವೊಮ್ಮೆ ಕೊಠಡಿ ಮೇಲ್ವಿಚಾರಕರು ಕೊಠಡಿಗೆ ಹೋದ ಮೇಲೂ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿರುತ್ತಾರೆ. ರೀತಿ ಮಾಡದೆ 10 ನಿಮಿಷ ಮುಂಚಿತವಾಗಿ ಕೊಠಡಿಯಲ್ಲಿ ನಿಗದಿತ ಆಸನದಲ್ಲಿ ಕುಳಿತುಕೊಳ್ಳಬೇಕು, ಯಾವುದಾದರೂ ಕಾಗದ, ಚೀಟಿ ಇತ್ಯಾದಿಗಳು ಇಲ್ಲವೆಂದು ದೃಢಪಡಿಕೊಳ್ಳಬೇಕು.
                ಬಹುಮುಖ್ಯವಾಗಿ ವಿದ್ಯಾರ್ಥಿ 5 ನಿಮಿಷಗಳ ಕಾಲ ಕಣ್ಣು ಮುಚ್ಚಿ ದೀರ್ಘ ಶ್ವಾಸ ತೆಗೆದುಕೊಳ್ಳಬೇಕು ಇದರಿಂದ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಮರಳಿ ದೇಹದ ಎಲ್ಲಾ ಭಾಗಗಳಿಗೆ ಮೆದುಳಿಗೆ  ರಕ್ತ ¥ÀÆರೈಕೆ ಆಗಿ ಮನಸ್ಸು ನಿರಾಳವಾಗುತ್ತದೆ. ಈಗ ಕಣ್ಣನ್ನು ನಿಧಾನವಾಗಿ ತೆರೆಯಬೇಕು ಪ್ರಶ್ನೆ ಪತ್ರಿಕೆ ನೀಡಿದಾಗ  ಸಾವಧಾನವಾಗಿ   ಪ್ರಶ್ನೆಗಳನ್ನು ಓದಿ ನೂರಕ್ಕೆ ನೂರರಷ್ಟು ಸರಿ ಉತ್ತರ ಎಂದು ಕಂಡು ಬಂದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭಿಸಬೇಕು.
9)         ಪೋಷಕರ  ಪಾತ್ರ
           10ನೇ ತರಗತಿ ಅಥವಾ 12ನೇ ತರಗತಿಗಳೇ ಜೀವನದ ಕೊನೆಯ ಅವಕಾಶವಲ್ಲ. ಜೀವನ ಮತ್ತು ಪ್ರಪಂಚ ವಿಶಾಲವಾಗಿದೆ. ಪೋಷಕರು ಸಂಗತಿಯನ್ನು ಮನವರಿಕೆ ಮಾಡಿಕೊಳ್ಳಬೇಕು. ನಿಮ್ಮ ಮಗುವಿನ ಸಾಮxÀåð, ಪರಿಸರ ಏನು ಎಂಬುದನ್ನು ಅರಿಯಬೇಕು. 20 PÉ.f ಭಾರ ಎತ್ತಬಲ್ಲ ನಿಮ್ಮ ಮಗುವಿಗೆ 100  ಭಾರ ಎತ್ತುವ ಸ್ಪರ್ಧೆಯಲ್ಲಿ ಗೆಲ್ಲಲಿ ಎಂದು 100 PÉ.f ಭಾರ ಎತ್ತುವ  ಸ್ಪರ್ಧೆಗೆ ಕಳುಹಿಸಿದರೆ ಏನಾಗಬಹುದು ಎಂಬುದನ್ನು ಯೋಚಿಸಬೇಕು. ಅಂದರೆ ಇದರರ್ಥ ನಿಮ್ಮ ಮಗು ಶೇ50% ಅಂಕಗಳಿಸಿ ಉತ್ತೀರ್ಣನಾಗುವಂತಿದ್ದರೆ ಶೇ 60% ಪಡೆ ಎಂದು ನಿಮ್ಮ ಮಗುವಿಗೆ ತಿಳಿಸದರೆ ಸರಿ . ಅದು ಬಿಟ್ಟು ಶೇ 85% ಅಂಕಗಳಿಸು ಎಂದು ಒತ್ತಡ ಹೇರಿದರೆ ನಿಮ್ಮ ಮಗು ಆತಂಕ, ಭಯ, ಹಿಂಜರಿಕೆ ಮುಂತಾದ ನಿಷೇಧಾತ್ಮಕ ಗುಣಗಳನ್ನು ಬೆಳೆಸಿಕೊಂಡು ಮಾನಸಿಕವಾಗಿ ತೊಂದರೆಗೆ ಈಡಾಗಬಹುದು ಎಲ್ಲರೂ 1ನೇ gÁåAಕ್ ಗಳಿಸಲು ಸಾಧ್ಯವಿಲ್ಲ, ವೈದ್ಯರೂ, ಇಂಜಿನಿಯರು ಆಗಲೂ ಸಾಧ್ಯವಿ®è ಉದ್ಯೋಗಗಳೇ ಜೀವನದ ಪರಮಗುರಿಯಲ್ಲ.
10)       ವಿದ್ಯಾರ್ಥಿಗಳಿಗೆ, ಪೋಷಕರಿಗೆ ಕೊನೆಯಮಾತು ಏನು ?
            ಪರೀಕ್ಷಾ ಸಮಯದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಕಾರ್ಯನಿರ್ವಹಿಸುತ್ತವೆ. ಹಣಮಾಡಿಕೊಳ್ಳಲು ವಿದ್ಯಾರ್ಥಿಗಳು, ಪೋಷಕರು ಇಂತಹ ಯಾವುದೇ ಅಡ್ಡದಾರಿಗೆ ಬಲಿಯಾಗದೆ ತಮ್ಮ ಮಕ್ಕಳು ಸ್ವತಂತ್ರವಾಗಿ ಪರೀಕ್ಷೆ ಬರೆಯಲಿ ಎಂದು ಆಶಿಸಬೇಕು. ಪರೀಕ್ಷೆಗಳಲ್ಲಿ ನಕಲು ಮಾಡಿ ಉತ್ತೀರ್ಣರಾದರೆ ಮುಂದಿನ ವಿದ್ಯಾಭ್ಯಾಸ ಸುಲಭವಾಗಿರಲಾರದು ಆದ್ದರಿಂದ ವಿದ್ಯಾರ್ಥಿಗಳೆ  ದೇಶದ ಭವಿಷ್ಯ, ಮುಂದಿನ ಪೀಳಿಗೆ, ಸಮಾಜ ಉತ್ತಮವಾಗಿರಬೇಕೆಂದರೆ ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಾಸಮಾಡಬೇಕು. ಬೇಕನ್ರವರು ಹೀಗೆ ಹೇಳಿದ್ದಾರೆ Education is not given, but earned; Character is not granted,  but cultivated ಅಂದರೆ ಶಿಕ್ಷಣವನ್ನು ಗಳಿಸಿ ಪಡೆಯಬೇಕೆ ಹೊರತು ಯಾರೋ ನೀಡುವುದಿಲ್ಲ.            ಶಿಕ್ಷಕರಿಗೆ ಮತ್ತು ಪೋಷಕರಿಗೆ ಮತ್ತೊಂದು ವಿಷಯ ಎಂದರೆ Give him a net but not a fish ಅಂದರೆ ನಿಮ್ಮ ಮಗುವಿಗೆ ದುಡಿದುಗಳಿಸುವ ಮಾರ್ಗ ಕಲಿಸಿ.
                       ಎಲ್ಲಾ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ







                                                 
ಎಲ್ಲರೊಳಗೊಂದಾಗು ಮಂಕುತಿಮ್ಮ