ಶಿಕ್ಷಕರ ದಿನಾಚರಣೆ
ಒಂದು ರಾಷ್ಟ್ರ ಪ್ರಗತಿ ಹೊಂದಬೇಕಾದರೆ ಶಿಕ್ಷಣ ಅಗತ್ಯ. ಶಿಕ್ಷಣದ ಆಧಾರ ಸ್ಥಂಭಗಳು ಶಿಕ್ಷಕರು. ಅಂತಹ ಪವಿತ್ರಕಾರ್ಯದಲ್ಲಿತೊಡಗಿರುವ ಶಿಕ್ಷಕರಾದ ತಮಗೆಲ್ಲರಿಗೂ ಮತ್ತೊಮ್ಮೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಹಣತೆ ತನಗಾಗಿ ಉರಿಯುದಿಲ್ಲ
ಬದಲಾಗಿ ಜಗತ್ತಿಗೆ ಬೆಳಕನ್ನು ನೀಡಲು
ತನ್ನನ್ನುತಾನು ಸುಟ್ಟಿಕೊಳ್ಳುವುದು.
ಎಂದು ರಾಮಕೃಷ್ಣ ಪರಮಹಂಸರು ನುಡಿದಿದ್ದಾರೆ
ಪುಣ್ಯಭೂಮಿ ಭಾರತ
ಧನ್ಯ ಭೂಮಿ ನಮ್ಮ ಭಾರತ
ಭಾರತದಲ್ಲಿ ಅನೇಕ ಪುಣ್ಯವಂತರು ಜನಿಸಿ ಸಾರ್ಥಕಜೀವನವನ್ನು ನಡೆಸಿ ನಮಗೆಲ್ಲಾ ದಾರಿ ದೀಪವಾಗಿದ್ದಾರೆ. »ÃUÉ ದೀಪದಂತೆ ಸಾರ್ಥಕಜೀವನವನ್ನು ನಡೆಸಿದವರು ಡಾ|| ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ಪ್ರತಿ ವರ್ಷಆಚರಿಸುತ್ತೇವೆ. ಡಾ|| ರಾಧಾಕೃಷ್ಣನ್ ಅವರು ನಮ್ಮ ದೇಶದ ಶಿಕ್ಷಣತಜ್ಞ, ಶ್ರೇಷ್ಠತತ್ವಜ್ಞಾನಿ, ಸರ್ವಶ್ರೇಷ್ಠ ದಾರ್ಶನಿಕ, ಅತ್ಯುತ್ತಮ ಆಡಳಿತಗಾರ, ಮೇಲಾಗಿ ಆದರಣೀಯ ಪ್ರಾಧ್ಯಾಪಕ. ಡಾ||ರಾಧಾಕೃಷ್ಣನ್ಅವರು ರಷ್ಯಾದೇಶಕ್ಕೆ ಭಾರತದ ರಾಯಭಾರಿಯಾಗಿ ನಮ್ಮ ರಾಷ್ಟ್ರದ ಉಪರಾಷ್ಟ್ರಪತಿಯಾಗಿ, ರಾಷ್ಟ್ರಪತಿಗಳಾಗಿ ಸೇವೆಸಲ್ಲಿಸಿ ಎಲ್ಲರ ಅಭಿಮಾನಕ್ಕೆ ಪಾತ್ರರಾದವರು.
ನೀವೊಬ್ಬರೇ ನನ್ನನ್ನುಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು. ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ. ನನಗೆ ಇದು ನೋವು ನೀಡಿದೆ. ನೀವು ಹೆಚ್ಚು ಕಾಲ ಬಾಳಬೇಕೆಂಬುದು ನನ್ನ ಆಸೆ. ನಾನು ಹೆಚ್ಚು ಕಾಲ ಬಾಳುವುದಿಲ್ಲ; ಎಂದು ರಷ್ಯಾ ದೇಶದ ಅಧ್ಯಕ್ಷರಾಗಿದ್ದ ಸ್ಟಾಲಿನ್ ಅವರು
ಡಾ||
ರಾಧಾಕೃಷ್ಣನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿರುತ್ತಾರೆ.
ಅವರ ಜೀವನದಲ್ಲಿ ನಡೆದ ಮರೆಯಲಾಗದ ಘಟನೆಯನ್ನು ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ಅದೇನೆಂದರೆ ಡಾ|| ರಾಧಾಕೃಷ್ಣನ್ಅವರು1918 ರಿಂದ 1921ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಎಲರ ಮೆಚ್ಚುಗೆಯನ್ನುಗಳಿಸಿದ್ದರು. ರಾಧಾಕೃಷ್ಣನ್ರವರಿಗೆ
ಮೈಸೂರಿನಿಂದ ಕಲ್ಕತ್ತಾಗೆ ವರ್ಗಾವಣೆÀಯಾದಾಗ ಅವರ ಬೀಳ್ಕೊಡುಗೆಯ ದಿನ
ರಾಧಾಕೃಷ್ಣನ್ರವರನ್ನು ಅಲಂಕರಿಸಿದ
ಕುದುರೆಗಾಡಿಯಲ್ಲಿ ಕೂರಿಸಿ ಕುದುರೆ ಬದಲು ವಿದ್ಯಾರ್ಥಿಗಳೇ
ದೇವರರಥವನ್ನು ಭಕ್ತಾಧಿಗಳು ಎಳೆಯುವ
ರೀತಿಯಲ್ಲಿ ಕಾಲೇಜಿನಿಂದ ರೈಲು ನಿಲ್ದಾಣದ ವರೆಗೆ ರಾಧಾಕೃಷ್ಣನ್ಕಿ ಜೈ ಎಂಬ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ಕುದುರೆಗಾಡಿಯನ್ನು ಎಳೆದರು. ಇಂದಿನ ಹದಗೆಟ್ಟ
ಶಿಕ್ಷಕ-ವಿದ್ಯಾರ್ಥಿ
ಹಾಗೂ
ಸಮುದಾಯದ ಸಂಬಂಧ ಸುಧಾರಿಸಲು ರಾಧಾಕೃಷ್ಣನ್ ಅವರ
ಬೀಳ್ಕೊಡುಗೆಯ ಈ ಘಟನೆ ಉತ್ತಮ ಉದಾಹರಣೆ ಎಂಬುದರಲ್ಲಿ
ಸಂಶಯವಿಲ್ಲ.
ಡಾ||ರಾಧಾಕೃಷ್ಣನ್ ಅವರು ಶ್ರೇಷ್ಠತತ್ವಜ್ಞಾನಿ ಮಾತ್ರವಲ್ಲ ಅತ್ಯುತ್ತಮ ಮಾತಿನ ಮೋಡಿಗಾರರೂ ಹೌದು ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಮಾಡಿದ ಅವರ ಭಾಷಣಗಳಿಗೆ ಅಲ್ಲಿಯ
ಜನ ಯಾರ ಪ್ರೇರಣೆಯೂ ಇಲ್ಲದೆ ಇಡೀಸಭೆ ಎದ್ದು ನಿಂತು ಜಯಕಾರದೊಂದಿಗೆ
ಕರತಾಡನ(standing ovation) ಮಾಡಿತ್ತು. ಇವರ
ಆಂಗ್ಲ ಭಾಷಣ ಮತ್ತು ಬರಹಗಳಿಂದಾಗಿ ಭಾರತೀಯ ತತ್ವಶಾಸ್ತ್ರ ವಿದೇಶಗಳಲ್ಲಿ ಮತ್ತೊಮ್ಮೆ ಪಸರಿಸಿತು.
ಡಾ|| ರಾಧಾಕೃಷ್ಣನ್ರವರ ಯಶಸ್ಸಿನ
ಗುಟ್ಟು ಏನೆಂದರೆ.
1. ಸಮಯ ಪಾಲನೆ
2. ಕಠಿಣ ಪರಿಶ್ರಮ ಇದರ ಫಲವಾಗಿ ಪಾಂಡಿತ್ಯ
ಲಭಿಸಿದೆ.
3. ಮಹೋನ್ನತ ರಾಷ್ಟ್ರಪ್ರೇಮ.
4. ಯಾವ ವಿಷಯವನ್ನೇ ಆಗಲಿ ಕುರುಡಾಗಿ ಒಪ್ಪಿಕೊಳ್ಳದೆ ಚಿಂತಿಸಿ, ಚರ್ಚಿಸಿ ತೀರ್ಮಾನಕ್ಕೆ ಬರುವ
ಮನೋಭಾವ.
5. ಸದಾಕ್ರಿಯಾಶೀಲ , ಪರಿಶುದ್ಧ ಜೀವನ
ಹೀಗೆ
ಹಲವಾರು ಗುಣಗಳನ್ನು
ಪಟ್ಟಿ ಮಾಡಬಹುದು. ಪ್ರತಿ ವರ್ಷ ನಾವು
ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಾ
ಬಂದಿದ್ದೇವೆ. ಈ
ಆಚರಣೆಗಳು ಅರ್ಥಪೂರ್ಣ ಆಗಬೇಕಾದರೆ ಡಾ|| ರಾಧಾಕೃಷ್ಣನ್ರವರ ಗುಣಗಳಲ್ಲಿ ಒಂದನ್ನಾದರೂ ನಾವೆಲ್ಲಾ ನಮ್ಮ ವೃತ್ತಿಯಲ್ಲಿ, ಬದುಕಿನಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಡೆದರೆ ಮಾತ್ರ ರಾಷ್ಟ್ರದ ಪ್ರಗತಿ
ಸಾಧ್ಯ. ಈ ರೀತಿ ಆದಲ್ಲಿ ದಿವ್ಯ, ಭವ್ಯ
ಭಾರತವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಕಾಣಬಹುದು.
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು, ಎಂದು ಡಿ.ವಿ.ಗುಂಡಪ್ಪನವರು ಹೇಳುತ್ತಾರೆ ಆದ್ದರಿಂದ ಎಲ್ಲರೂ ಕಾಯಕಗೌರವವನ್ನು ರೂಢಿಸಿಕೊಳ್ಳಬೇಕು.
ವಚನಕಾರರು ಕಾಯಕಗೌರವದ ಬಗ್ಗೆ ಹೀಗೆ ಹೇಳುತ್ತಾರೆ
ಕಾಯಕದಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗ ಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗು ಹರಿಯಬೇಕು
ಕಾಯಕ ವೇಕೈಲಾಸವಾದ ಕಾರಣ
ನಮಗೆ ಕಣ್ಣಿಗೆ ಕಾಣುವ ದೇವರೆಂದರೆ ತಂದೆ, ತಾಯಿ ಮತ್ತು ಗುರು. ಇಂತಹ ಪವಿತ್ರ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವತಾವೆಲ್ಲರೂ ಪುಣ್ಯವಂತರು, ಭಾಗ್ಯವಂತರು.
ಭಾರತದೇಶದ ಭವಿಷ್ಯ ಉಜ್ವಲವಾಗಬೇಕಾದರೆ ಎಲ್ಲಾ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ಸಮಾಜದ ಬಗ್ಗೆ ಗೌರವಭಾವನೆಯನ್ನು ತುಂಬಿ
ಮತ್ತು ಉತ್ತಮ ಶಿಕ್ಷಣವನ್ನು ನೀಡಿದರೆ ದೇಶದ ಪ್ರUÀತಿ
ಸಾಧ್ಯ.
------------------******************------------------